ಕಾರ್ಯಕ್ರಮಗಳು ಧಾರ್ಮಿಕ ಪ್ರಜ್ಞೆ ಮೂಡಿಸಲಿ: ಗಣೇಶ ಕಿಣಿ

ಕುಂದಾಪುರ: ಕಲಿಯುಗದಲ್ಲಿ ದಾನ, ಧರ್ಮಗಳ ಮೂಲಕ ಮೋಕ್ಷ ಹೊಂದಲು ಸಾಧ್ಯ. ಮಕ್ಕಳಲ್ಲಿ  ಧಾರ್ಮಿಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಧರ್ಮ ಸಂಸ್ಕೃತಿಯ ಆಚರಣೆಗಳಲ್ಲಿ ಎಲ್ಲರೂ ಒಟ್ಟುಗೂಡಿ ನಡೆಸಿದಾಗ ಪ್ರಾಮುಖ್ಯತೆಯನ್ನು ಹೊಂದಲು ಸಾಧ್ಯವಿದೆ ಎಂದು ಬೆಳ್ವೆ ಉದ್ಯಮಿ ಬಿ. ಗಣೇಶ ಕಿಣಿ ಬೆಳ್ವೆ ಅವರು ಹೇಳಿದರು.

ಅವರು ಗೋಳಿಯಂಗಡಿ ಪ್ರಜ್ಞಾ ಯುವಕ ಮಂಡಲ, ಶ್ರೀ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಗೋಳಿಯಂಗಡಿ, ನಾರಾಯಗುರು ಬಿಲ್ಲವ ಸೇವಾ ಸಂಘ ಬೆಳ್ವೆ ವಲಯ, ಕುಡುಬಿ ಸಮಾಜೋದ್ಧಾರಕ ಸಂಘ ಹಿಲಿಯಾಣ ಆಮ್ರಕಲ್ಲು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೋಳಿಯಂಗಡಿ ಇವರ ಸಂಯುಕ್ತ ಅಶ್ರಯದಲ್ಲಿ ಹಿಲಿಯಾಣ ಆಮ್ರಕಲ್ಲು ಶ್ರೀ ಮಲ್ಲಿಕಾರ್ಜುನ ಸಭಾಭವನದಲ್ಲಿ ಸೆ.6ರಂದು ನಡೆದ 6ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆವರ್ಸೆ ಗ್ರಾ. ಪಂ. ಅಧ್ಯಕ್ಷ ಚಿತ್ತರಂಜನ್‌ದಾಸ್‌ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಬೆಳ್ವೆ ಗ್ರಾ. ಪಂ. ಉಪಾಧ್ಯಕ್ಷ ಸುರೇಂದ್ರ ನಾಯ್ಕ ಯಳಂತೂರು, ಸದಸ್ಯರಾದ ಚಂದ್ರಶೇಖರ್‌ ಶೆಟ್ಟಿ ಸೂರೊYàಳಿ, ವೈ. ಕರುಣಾಕರ ಶೆಟ್ಟಿ ಯರುಕೋಣೆ, ಸಂತೋಷ ಹೆಗ್ಡೆ ಬೆಳ್ವೆ, ಮಾಜಿ ಅಧ್ಯಕ್ಷ ಬಿ. ಉದಯ ಕುಮಾರ್‌ ಪೂಜಾರಿ, ನಿವೃತ್ತ ಶಿಕ್ಷಕ ಸುರೇಶ ಶೆಟ್ಟಿ ಬೆಳ್ವೆ, ಪ್ರಜ್ಞಾ ಯುವಕ ಮಂಡಲದ ಅಧ್ಯಕ್ಷ ಗಣಪತಿ ನಾಯ್ಕ, ಕಾರ್ಯಕ್ರಮದ ಸಂಯೋಜಕ ವಿಜಯಕುಮಾರ್‌ ಶೆಟ್ಟಿ ಗೋಳಿಯಂಗಡಿ, ಆವರ್ಸೆ ಗ್ರಾ.ಪಂ. ಸದಸ್ಯ ಪ್ರಮೋದ ಹೆಗ್ಡೆ, ಮುಖ್ಯ ಶಿಕ್ಷಕರಾದ ಶೇಖರ್‌ ಯು., ಹಾಗೂ ರವಿಚಂದ್ರ ಕಾರಂತ, ಉಪನ್ಯಾಸಕಿ ಸುಜಾತ, ಉಡುಪಿ ಜಿಲ್ಲಾ ಕುಡುಬಿ ಸಂಘದ ಅಧ್ಯಕ್ಷ ದೇವಣ್ಣ ನಾಯ್ಕ ಹೆಂಗವಳ್ಳಿ  ಉಪಸ್ಥಿತರಿದ್ದರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಪ್ರಯುಕ್ತ ಮುದ್ದುಕೃಷ್ಣ ವೇಷ ಸ್ಪರ್ಧೆ, ಭಕ್ತಿಗೀತೆ, ಸಮೂಹ ನೃತ್ಯ, ಭಗವದ್ಗೀತೆ ಕಂಠಪಾಠ, ರಸ ಪ್ರಶ್ನೆ, ಚಿತ್ರಕಲೆ, ಮೊಸರುಕುಡಿಕೆ ಕಾರ್ಯಕ್ರಮಗಳು ಜರಗಿದವು.

ಶಿಕ್ಷಕ ನಾರಾಯಣ ನಾಯ್ಕ ಸ್ವಾಗತಿಸಿದರು. ಗಣೇಶ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು. ಗಣಪತಿ ನಾಯ್ಕ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com