ಸೌರ ಶಕ್ತಿಯಿಂದ ಕಡಿಮೆ ಖರ್ಚು ಹೆಚ್ಚು ಉಳಿತಾಯ : ಟಿ. ಸುಧೀಂದ್ರ

ಕುಂದಾಪುರ: ಆಧುನಿಕ ಜಗತ್ತಿನಲ್ಲಿ ದಿನನಿತ್ಯ ವಿದ್ಯುತ್ ಬೇಡಿಕೆಗಳು ಹೆಚ್ಚುತ್ತಿದ್ದು, ವಿದ್ಯುತ್ ಉತ್ಪಾದನ ಮಟ್ಟ ಬೇಡಿಕೆಗೆ ತಕ್ಕಂತೆ ಇಲ್ಲದಿರುವುದರಿಂದ ಸೌರ ವಿದ್ಯುತ್‌ಗೆ ಮೊರೆ ಹೋಗುವುದು ಇಂದಿನ ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಜನರ ಅಗತ್ಯಕ್ಕೆ ತಕ್ಕುದಾದ ಅತ್ಯುತ್ತಮ ತಂತ್ರಜ್ಞಾನವನ್ನು ಆರ್ಬ್ ಎನರ್ಜಿ ಕಂಪನಿ ಗ್ರಾಹಕರಿಗೆ ಒದಗಿಸುತ್ತಿದ್ದು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಉಳಿತಾಯ ಮತ್ತು ಲಾಭಗಳಿಸುವ ಮಾರ್ಗವನ್ನು ತೋರಿದೆ ಎಂದು ಆರ್ಬ್ ಎನರ್ಜಿಯ ಜನರಲ್ ಮೇನೆಜರ್ ಟಿ. ಸುಧೀಂದ್ರ ಅವರು ಹೇಳಿದರು

ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಸೋಲಾರ್ ತಂತ್ರಜ್ಞಾನದ ನೂತನ ಆವಿಷ್ಕಾರ, ನೆಟ್ ಮೀಟರಿಂಗ್‌ನಲ್ಲಿ ಗ್ರಿಡ್ ಟೈಡ್ ಸಿಸ್ಟಮ್ ಕುರಿತು ರೋಟರಿ ಸದಸ್ಯರು ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾ ಮಾತನಾಡಿದರು.

ಸೌರ ಶಕ್ತಿಯಿಂದ ವಿದ್ಯುತ್ ಶಕ್ತಿಯನ್ನು ಪಡೆದು ನಮ್ಮ ಮನೆ, ಕಛೇರಿ ನಿರ್ವಹಣೆಯ ಬಳಿಕ ಉಳಿದ ಹೆಚ್ಚುವರಿ ಸೌರ ವಿದ್ಯುತ್‌ನ್ನು ಗ್ರಿಡ್ ಮೂಲಕ ವಿದ್ಯುತ್ ಕಂಪನಿಗೆ ಮಾರಾಟ ಮಾಡಿ ಆದಾಯಗಳಿಸಬಹುದು ಜೊತೆಗೆ ಸ್ವಯಂ ವಿದ್ಯುತ್ ಉತ್ಪಾದನೆ ಮಾಡುವುದರಿಂದ ವಿದ್ಯುತ್ ಅಭಾವವನ್ನು ತಗ್ಗಿಸಿ ಸಾಮಾಜಿಕ ಬೇಡಿಕೆಗಳನ್ನು ಸರಿದೂಗಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ಆರ್ಬ್ ಎನರ್ಜಿಯ ವಲಯ ವ್ಯವಸ್ಥಾಪಕ ಬಾಲಕೃಷ್ಣ ಆಚಾರ್ಯ ಹೇಳಿದರು.

ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆವಹಿಸಿದ್ದರು. ಡಾ. ಎಸ್. ರಾಜೀವ ಶೆಟ್ಟಿ ರೋಟರಿ ಮಾಹಿತಿ ನೀಡಿದರು. ಕ್ಲಬ್‌ನ ಮಾಜಿ ಛೇರ್‌ಮೆನ್ ಪ್ರಶಾಂತ್ ತೋಳಾರ್ ಹಿಂದಿನ ಸಾಲಿನ ನಿಧಿಯನ್ನು ರೋಟರಿ ಕಟ್ಟಡ ಅಭಿವೃದ್ಧಿಗೆ ಹಸ್ತಾಂತರಿಸಿದರು. ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ಎಸ್. ಶಶಿಧರ ಶೆಟ್ಟಿ ಸಾಲಗದ್ದೆ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com