ಕುಂದಾಪುರ ಚರ್ಚ್ ಮೈದಾನದಲ್ಲಿ ಜಿಲ್ಲಾ ಮಟ್ಟದ ಥ್ರೋಬಾಲ್ ಟೂರ್ನಿ

ಹೋಲಿ ರೊಜರಿ ಚರ್ಚನ ಮೈದಾನದಲ್ಲಿ ಜಿಲ್ಲಾ ಮಟ್ಟದ ಥ್ರೋಬಾಲ್ ಟೂರ್ನಿ
ಕುಂದಾಪುರ:  ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ವತಿಯಿಂದ, ಕುಂದಾಪುರ ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ, ಕುಂದಾಪುರ ಹೋಲಿ ರೊಜರಿ ಚರ್ಚನ ಮೈದಾನದಲ್ಲಿ ಜಿಲ್ಲಾ ಮಟ್ಟದ ಹುಡುಗರ ಮತ್ತು ಹುಡುಗಿಯರ ಥ್ರೋಬಾಲ್ ಟೂರ್ನಿಯನ್ನು ಆರ್. ಬಿ ನಾಯಕ್ ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.  

ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲಾರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ಸ್ವಾಗತಿಸಿದರು. ದೈಹಿಕ ಉಪ ನಿರ್ದೇಶಕರಾದ ಶ್ರೀಧರ್ ಶೆಟ್ಟಿ ಪ್ರಸ್ತಾವಿಕ ಭಾಷಣ ಮಾಡಿಗರು.

ಉದ್ಘಾಟಕರಾದ ಆರ್,ಬಿ. ನಾಯಕ್ ಇಂತಹ  ಟೂರ್ನಿಯನ್ನು ಕೆಳಹಂತದಿಂದ ಹಿಡಿದು ಮೇಲ್ಪಟ್ಟದ ವರೆಗೆ ಅನೇಕ ಕಡೆ ಆಯೋಜಿಸ ಬೇಕಾಗುತ್ತದೆ, ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಇಂತಹ ಒಂದು ಟೂರ್ನಿ ಆಯೋಜಿಸಿದೆ, ಈ ಕಾಲೇಜು ಆಟದಲ್ಲದೆ ಶಿಕ್ಷಣದಲ್ಲಿ ಮುಂದೆ ಇದ್ದು, ಈ ಸಾಲಿನಲ್ಲಿ ೧೦೦ ಶೇಕಡ ಫಲಿತಾಂಶವನ್ನು ಪಡೆದು ಹೆಸರು ಗಳಿಸಿದೆ ಎಂದು ಶ್ಲಾಗಿಸಿದರು.

ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಚಾಲಕಾರಾದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ವ|ಅನೀಲ್ ಡಿಸೋಜಾ ಸಭಾ ಕಾರ್ಯದ ಅಧ್ಯಕ್ಷಾರಾಗಿ, ಕ್ರೀಡಾಳುಗಳಿಗೆ ಶುಭ ಕೋರಿ ಈ ಟೂರ‍್ನಿಯನ್ನು ಆಯೋಜಿಸಲು ಸಹಕರಿಸಿದವರನ್ನು ಸ್ನರಿಸಿದರು.

ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ವಿಜಯ ಪೂಜಾರಿ, ರಾಜೇಶ್ ಕಾವೇರಿ, ಉಪ ಪ್ರಾಂಶುಪಾಲೆ ಮಂಜುಳ ನಾಯರ್, ಪಾಲನ ಮಂಡಳಿ ಉಪಾಧ್ಯಕ್ಷ ಜೋನ್ಸನ್ ಆಲ್ಮೇಡಾ ಮುಂತಾದವರು ವೇದಿಕೆಯಲ್ಲಿದ್ದರು.
 ಉಪನ್ಯಾಸಕಿ ರೇಶ್ಮಾ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕಿ ಶರ್ಮಿಳಾ ವಂದಿಸಿದರು.

ಟೂರ್ನಿಯಲ್ಲಿ  ಹುಡುಗಿಯರ ವಿಭಾಗದಲ್ಲಿ ಕುಂದಾಪುರ ತಾಲೂಕು ಚಾಂಪಿಯೆನ್ ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು, ಕುಂದಾಪುರ ತಂಡ, ಹಾಗೇ ಹುಡುಗರ ವಿಭಾಗದಲ್ಲಿ  ಕುಂದಾಪುರ ತಾಲೂಕು ಚಾಂಪಿಯೆನ್, ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು  ತಂಡ, ಹಾಗೇ ಕಾರ್ಕಳ, ಉಡುಪಿ ಉತ್ತರ, ಮತ್ತು ದಕ್ಷಿಣದ ವಲಯದ ಹುಡುಗ ಹುಡುಗಿಯರ ತಂಡಗಳು ಭಾಗವಹಿಸಿದ್ದವು.

ಅಂತೀಮವಾಗಿ ಹುಡುಗಿಯರ ವಿಭಾಗದಲ್ಲಿ ಕಾರ್ಕಳ ತಾಲೂಕು ಪ್ರಥಮ ಸ್ಥಾನ ಪಡೆದರೆ, ಎರಡನೆ ಸ್ಥಾನ ಉಡುಪಿ (ಉತ್ತರ ವಲಯ) ಪಡೆಯಿತು. ಹುಡುಗರ ವಿಭಾಗದಲ್ಲಿ ಉಡುಪಿ (ಉತ್ತರ ವಲಯ) ಪ್ರಥಮ ಸ್ಥಾನ ಪಡೆದರೆ, ದ್ವೀತಿಯ ಸ್ಥಾನ ಕುಂದಾಪುರ ತಾಲೂಕು (ಕುಂದಾಪುರ)ಸರಕಾರಿ ಪದವಿ ಪೂರ್ವ ಕಾಲೇಜು ಗಳಿಸಿತು.ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com